ಪಬ್ಜಿ ಬ್ಯಾನ್​ ಆದ್ರೇನಂತೆ ಫೌಜಿ ಇದೆಯಲ್ಲ; ಬೆಂಗಳೂರು ಮೂಲದ ಸಂಸ್ಥೆಯ ಕಾರ್ಯಕ್ಕೆ ಅಕ್ಷಯ್​ ಮೆಚ್ಚುಗೆ

 

ಚೀನಾ ಮೂಲದ ಆ್ಯಪ್​ ಮತ್ತು ಗೇಮಿಂಗ್​ ಅಪ್ಲಿಕೇಷನ್​ಗಳಿಗೆ ಕೇಂದ್ರ ಸರ್ಕಾರ ಬ್ಯಾನ್​ ಬಿಸಿ ಮುಟ್ಟಿಸುತ್ತಿದೆ. ಈಗಾಗಲೇ ಸಾಕಷ್ಟು ಅಪ್ಲಿಕೇಷನ್​ಗಳನ್ನು ನಿಷೇಧಿಸಲಾಗಿದೆ. ಅದರಲ್ಲೂ ಗೇಮಿಂಗ್​ ಅಪ್ಲಿಕೇಷನ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಪಬ್ಜಿ ಸಹ ಬ್ಯಾನ್​ ಮಾಡಲಾಗಿತ್ತು. ಇದೀಗ ಆ ಆ್ಯಪ್​ಅನ್ನೇ ಹೋಲುವ ಇನ್ನೊಂದು ಅಪ್ಲಿಕೇಷನ್​ ಅನ್ನು ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಘೋಷಣೆ ಮಾಡಿದ್ದಾರೆ. ಅದರ ಹೆಸರು ಫೌಜಿ!


ವಿಶೇಷ ಏನೆಂದರೆ ಪ್ರಧಾನಿ ಮೋದಿಯ ಆತ್ಮನಿರ್ಭರತಾ ಅಭಿಯಾನಕ್ಕೆ ಸ್ಫೂರ್ತಿ ನೀಡುವ ಮತ್ತು ಅದರಿಂದ ಪ್ರೇರೇಪಿತಗೊಂಡು ಫೌಜಿ ಅಪ್ಲಿಕೇಷನ್​ಅನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ. ಈ ಗೇಮಿಂಗ್​ ಅಪ್ಲಿಕೇಷನ್​ ಅಕ್ಟೋಬರ್​ ವೇಳೆಗೆ ಎಲ್ಲರಿಗೂ ಲಭ್ಯವಾಗಲಿದ್ದು, ಬೆಂಗಳೂರು ಮೂಲದ ಎನ್ ​ಕೋರ್​ ಸಂಸ್ಥೆ ಇದನ್ನು ಸಿದ್ಧಪಡಿಸಿದೆ.


ಫಿಯರ್​ಲೆಸ್​ ಆ್ಯಂಡ್​ ಯೂನೈಟೆಡ್​ ಗಾರ್ಡ್ಸ್ ಎಂಬ ಹೆಸರಿರುವ ಈ ಗೇಮಿಂಗ್​ ಆ್ಯಪ್​ ಹಲವು ವಿಶೇಷತೆಗಳಿಂದ ಕೂಡಿದ್ದು, ಸೈನಿಕರ ತ್ಯಾಗ ಬಲಿದಾನದ ಬಗ್ಗೆಯೂ ಗೇಮ್​ನಲ್ಲಿ ತಿಳಿಸಲಾಗಿದೆಯಂತೆ. ಅಷ್ಟೇ ಅಲ್ಲ ಗೇಮ್​ ಸಲುವಾಗಿ ಬಳಕೆ ಮಾಡುವ ನೆಟ್​ನಲ್ಲಿ ಶೇ. 20 ಪ್ರತಿಶತದ ಆದಾಯ ನೇರವಾಗಿ ಭಾರತ್​ಕೀ ವೀರ್​ ಟ್ರಸ್ಟ್​ಗೆ ಜಮಾವಣೆಯಾಗಲಿದೆ. (ಏಜೆನ್ಸೀಸ್)



Comments