ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ದಾರೂಢ ಸ್ವಾಮೀಜಿ ಹೆಸರು ನಾಮಕರಣಕ್ಕೆ ಕೇಂದ್ರ ಒಪ್ಪಿಗೆ

 

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ದಾರೂಢ ಸ್ವಾಮೀಜಿ ಹೆಸರು ನಾಮಕರಣಕ್ಕೆ ಕೇಂದ್ರ ಒಪ್ಪಿಗೆ

ರಾಜ್ಯದ ಪ್ರಮುಖ ರೈಲು ನಿಲ್ದಾಣವಾದ ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ  ಶ್ರೀಸಿದ್ದಾರೂಢ ಸ್ವಾಮೀಜಿ ಅವರ  ಹೆಸರನ್ನು ನಾಮಕರಣ ಮಾಡಬೇಕೆಂಬ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರವು ಈಗ ಸ್ಪಂದಿಸಿದ್ದು. ಈ ವಿಚಾರವಾಗಿ ಈಗ ಕೇಂದ್ರ ಸರ್ಕಾರವು ರಾಜ್ಯ ಕಂದಾಯ ಇಲಾಖೆ ಪತ್ರವನ್ನು ರವಾನಿಸಿದೆ.

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ದಾರೂಢ ಸ್ವಾಮೀಜಿ ಹೆಸರು ನಾಮಕರಣಕ್ಕೆ ಕೇಂದ್ರ ಒಪ್ಪಿಗೆ

ನವದೆಹಲಿ: ರಾಜ್ಯದ ಪ್ರಮುಖ ರೈಲು ನಿಲ್ದಾಣವಾದ ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ  ಶ್ರೀಸಿದ್ದಾರೂಢ ಸ್ವಾಮೀಜಿ ಅವರ  ಹೆಸರನ್ನು ನಾಮಕರಣ ಮಾಡಬೇಕೆಂಬ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರವು ಈಗ ಸ್ಪಂದಿಸಿದ್ದು. ಈ ವಿಚಾರವಾಗಿ ಈಗ ಕೇಂದ್ರ ಸರ್ಕಾರವು ರಾಜ್ಯ ಕಂದಾಯ ಇಲಾಖೆ ಪತ್ರವನ್ನು ರವಾನಿಸಿದೆ.

ಈಗ ಈ ವಿಚಾರವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಕೇಂದ್ರ ಗೃಹ ಸಚಿವ ಮತ್ತು ರೈಲ್ವೆ ಸಚಿವ ಅವರಿಗೆ ಈ ಕ್ರಮಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಹೆಸರನ್ನು 'ಶ್ರೀಸಿದ್ದಾರೂಢ ಸ್ವಾಮೀಜಿ ನಿಲ್ದಾಣ 'ಎಂದು ಬದಲಾಯಿಸಲು ಅನುಮೋದನೆ ನೀಡಿದ ಗೌರವಾನ್ವಿತ ಗೃಹ ಸಚಿವರಾದ ಅಮಿತ್‌ಶಾ ಜಿ ಮತ್ತು ಪಿಯುಶ್‌ಗೋಯಲ್ ಜಿ ಅವರಿಗೆ ಧನ್ಯವಾದಗಳು.ಇದು ಸ್ಥಳೀಯ ಜನರು ಮತ್ತು ರಾಜ್ಯ ನಾಯಕರ ದೀರ್ಘಕಾಲದ ಬೇಡಿಕೆಯಾಗಿದೆ, ಅದು ಈಗ ಈಡೇರಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

Comments