ಭಾರತೀಯ ವಾಯುಸೇನೆ ನೇಮಕಾತಿ ರ‍್ಯಾಲಿಗೆ ನೋಂದಣಿ ಆರಂಭ

 

ಭಾರತೀಯ ವಾಯುಸೇನೆ ನೇಮಕಾತಿ ರ‍್ಯಾಲಿಗೆ ನೋಂದಣಿ ಆರಂಭ

ಭಾರತೀಯ ವಾಯುಸೇನೆಯಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 04 ರವರೆಗೆ ಗ್ರೂಪ್-ಎಕ್ಸ್ ಏರ್‌ಮನ್ (ತಾಂತ್ರಿಕ ಟ್ರೇಡ್) ಹುದ್ದೆಗಳಿಗೆ ಬೆಂಗಳೂರಿನಲ್ಲಿ ರ‍್ಯಾಲಿ ಏರ್ಪಡಿಸಿದ್ದು, ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕ ರಾಜ್ಯಕ್ಕೆ ಸೇರಿದ ಭಾರತೀಯ ಅವಿವಾಹಿತ ಪುರುಷ ನಾಗರಿಕರು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು

ಭಾರತೀಯ ವಾಯುಸೇನೆ ನೇಮಕಾತಿ ರ‍್ಯಾಲಿಗೆ ನೋಂದಣಿ ಆರಂಭ

ಬೆಂಗಳೂರು: ಭಾರತೀಯ ವಾಯುಸೇನೆಯಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 04 ರವರೆಗೆ ಗ್ರೂಪ್-ಎಕ್ಸ್ ಏರ್‌ಮನ್ (ತಾಂತ್ರಿಕ ಟ್ರೇಡ್) ಹುದ್ದೆಗಳಿಗೆ ಬೆಂಗಳೂರಿನಲ್ಲಿ ರ‍್ಯಾಲಿ ಏರ್ಪಡಿಸಿದ್ದು, ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಕರ್ನಾಟಕ ರಾಜ್ಯಕ್ಕೆ ಸೇರಿದ ಭಾರತೀಯ ಅವಿವಾಹಿತ ಪುರುಷ ನಾಗರಿಕರು ಅರ್ಜಿ ನೋಂದಣಿ ಮಾಡಿಕೊಳ್ಳಬಹುದು.

#ಸಿಓಬಿಎಸ್‌ಇಯು ಮಾನ್ಯತೆ ನೀಡಿದ ಶೈಕ್ಷಣಿಕ ಮಂಡಳಿಗಳಿಯ ಕಡ್ಡಾಯ ವಿಷಯಗಳಾಗಿರುವ ಗಣಿತಶಾಸ್ತ, ಭೌತಶಾಸ್ತ ಮತ್ತು ಇಂಗ್ಲೀಷನೊಂದಿಗೆ ಇಂಟರ್‌ಮೀಡಿಯೆಟ್/ 12ನೇ (ಪಿಯುಸಿ) ತತ್ಸಮಾನ ಪರೀಕ್ಷೆಯಲ್ಲಿ ಸರಾಸರಿ ಕನಿಷ್ಠ ಶೇ.50 ಅಂಕಗಳನ್ನು ಪಡೆದು  ಉತ್ತೀರ್ಣರಾಗಿರಬೇಕು ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಇಂಜಿನಿಯರಿಂಗ್ (ಮೆಕ್ಯಾನಿಕಲ್/ಎಲೆಕ್ಟಿçಕಲ್/ಎಲೆಕ್ಟಾçನಿಕ್ಸ್/ಆಟೋಮೋಬೈಲ್/ಕಂಪ್ಯೂಟರ್ ಸೈನ್ಸ್/ಇನ್ಸ್ಟ್ರೂಮೆಂಟೇಷನ್ ಟೆಕ್ನಾಲಜಿ/ಇನ್‌ಫಾರಮೇಷನ್ ಟೆಕ್ನಾಲಜಿಯಲ್ಲಿ 03 ವರ್ಷಗಳ ಡಿಪ್ಲೋಮಾ ಕೋರ್ಸನ್ನು ಸರಾಸರಿ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಆನ್‌ಲೈನ್ ನೋಂದಣಿಗೆ ಸೆಪ್ಟೆಂಬರ್.10 ಕೊನೆಯ ದಿನವಾಗಿದೆ.

ದಿನಾಂಕ: 17/01/2000 ರಿಂದ 30/12/2003ರೊಳಗೆ ಜನಿಸಿರುವ(ಎರಡು ದಿನಗಳು ಒಳಗೊಂಡಿರುತ್ತವೆ), 152.5. ಸೆ.ಮೀ. ಎತ್ತರವಿರುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ., ಪಿ.ಯು.ಸಿ/ಡಿಪ್ಲೋಮಾ ಮೂಲ ಅಂಕಪಟ್ಟಿ, ಪಾಸ್ ಪೋರ್ಟ ಅಳತೆಯ ಭಾವಚಿತ್ರಗಳು ಹಾಗೂ ಆಧಾರ ಕಾರ್ಡನೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿ ಮತ್ತು ಆನ್‌ಲೈನ್ ನೋಂದಣಿಗಾಗಿ: www.airmenselection.cdac.in ಗೆ ಭೇಟಿ ನೀಡಬೇಕು. ಮಾಣಿಕ್ ಶಾ ಪರೇಡ ಗ್ರೌಂಡ, ಕಬ್ಬನ್ ರೋಡ , ಬೆಂಗಳೂರು, ಕರ್ನಾಟಕ-560001 ದಲ್ಲಿ ರ‍್ಯಾಲಿ ನಡೆಯಲಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ #ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments