ಖ್ಯಾತ ಬಾಲಿವುಡ್ ನಟ ಹಾಗೂ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಡೆಲ್

 

ಖ್ಯಾತ ಬಾಲಿವುಡ್ ನಟ ಹಾಗೂ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಡೆಲ್

ನಟ-ನಿರ್ಮಾಪಕ ಸಾಜಿದ್ ಖಾತ ಮೇಲೆ ವ್ರುತಿಯಲ್ಲಿ ಮಾಡೆಲ್ ಆಗಿರುವ ಮಹಿಳೆಯೋರ್ವಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಖ್ಯಾತ  ಬಾಲಿವುಡ್ ನಟ ಹಾಗೂ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಡೆಲ್

ನವದೆಹಲಿ: ನಟ-ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರ ಮೇಲೆ ಮಾಡೆಲ್ ವೋರ್ವಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ, ಇದಾದ ಬಳಿಕ  ಅರೆಸ್ಟ್ ಸಾಜಿದ್ಖಾನ್ ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಶುಕ್ರವಾರ ಟ್ರೆಂಡ್ ಸೃಷ್ಟಿಸಿದ್ದು, ಸಾಜಿದ್ ಬಂಧನಕ್ಕೆ  ಒತ್ತಾಯಿಸಲಾಗುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಡಿಂಪಲ್ ಪಾಲ್ ಹೆಸರಿನ ಅನಧಿಕೃತ ಖಾತೆಯ ಮೂಲಕ ನೀಡಲಾಗಿರುವ ಮಾಹಿತಿ ಪ್ರಕಾರ  'ಮೀಟು ಚಳುವಳಿ ಪ್ರಾರಂಭವಾದಾಗ, ಅನೇಕ ಜನರು ಸಾಜಿದ್ ಖಾನ್ ಬಗ್ಗೆ ಮಾತನಾಡಿದ್ದರು. ಆದರೆ, ನನ್ನಿಂದ ಆ ಸಾಹಸ ತೋರಲಾಗಲಿಲ್ಲ. ಏಕೆಂದರೆ, ಉದ್ಯಮದಲ್ಲಿನ ಹಲವು ಕಲಾವಿದರಂತೆ ನಾನೂ ಕೂಡ ಯಾರೂ ಗಾಡ್ ಫಾದರ್ ಇಲ್ಲ ಹಾಗೂ ನನ್ನ ಕುಟುಂಬದ ಜವಾಬ್ದಾರಿಯೂ ಕೂಡ ನನ್ನ ಮೇಲಿತ್ತು. ಅದಕ್ಕಾಗಿ ಸುಮ್ಮನಿರಬೇಕಾಗಿತ್ತು. ಪ್ರಸ್ತುತ ನನ್ನ ತಂದೆ-ತಾಯಿ ನನ್ನೊಂದಿಗೆ ಇಲ್ಲ. ನಾನು ಇದೀಗ ಕೇವಲ ನನಗೋಸ್ಕರ ಸಂಪಾದಿಸಬೇಕು. ಇಂತಹುದರಲ್ಲಿ ನಾನು ಸಾಹಸ ಮಾಡಿದ್ದೇನೆ. ನಾನು 17ನೇ ವಯಸ್ಸಿನವಳಾಗಿದ್ದಾಗ ಸಾಜಿದ್ ನನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ" ಎಂದಿದ್ದಾಳೆ.

ಡಿಂಪಲ್ ಪಾಲ್ ವತಿಯಿಂದ ಗಂಭೀರ ಆರೋಪ
ಆಡಿಶನ್ ವೊಂದರ ವೇಳೆ ತಮ್ಮ ಜೊತೆಗೆ ಈ ಘಟನೆ ನಡೆದಿದೆ ಎಂದು ಡಿಂಪಲ್ ಪಾಲ್ ಹೇಳಿದ್ದಾರೆ. "ಸಾಜಿಕ್ ನನ್ನೊಂದಿಗೆ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾರೆ. ನನ್ನ ಮೈಮುಟ್ಟಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಚಿತ್ರ 'ಹೌಸ್ ಫುಲ್' ಕೆಲಸ ನೀಡುವುದಾಗಿ ಹೇಳಿ ತಮ್ಮ ಕಣ್ಣೆದುರಿಗೆ ನನಗೆ ನಿರ್ವಸ್ತ್ರರಾಗಲು ಕೂಡ ಹೇಳಿದ್ದರು" 

Comments