Current Affairs

🌻♦️"ಪ್ರಚಲಿತ"♦️🌻

🌷 ಜಪಾನ್‌ನ ಪ್ರಧಾನಿಯಾಗಲಿದ್ದಾರೆ ರೈತನ ಮಗ ಸುಗಾ

ಡೆಮಕ್ರಟಿಕ್‌ ಪಕ್ಷದ ನಾಯಕತ್ವಕ್ಕಾಗಿ ಸೋಮವಾರ ಚುನಾವಣೆ ನಡೆಯಿತು. ಇದರಲ್ಲಿ ಸುಗಾ ಆಯ್ಕೆಯಾದರು. ಈ ವಾರ ಜಪಾನ್‌ ಸಂಸತ್‌ನಲ್ಲಿ ಪ್ರಧಾನಿಯ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಜರುಗಲಿದೆ. ಈ ಆಯ್ಕೆಯ ಹಾದಿ ಸದ್ಯ ಸುಗಾ ಅವರಿಗೆ ಸುಗಮವಾಗಿದೆ. ಸಂಸತ್‌ನಲ್ಲಿ ಲಿಬರಲ್‌ ಡೆಮಕ್ರಟಿಕ್‌ ಪಕ್ಷವೇ ಬಹುಮತ ಹೊಂದಿದ್ದು, ಸುಗಾ ಬಹುತೇಕ ಪ್ರಧಾನಿಯಾದಂತೆಯೇ.

ಹಿಂದಿನ ಪ್ರಧಾನಿ ಅಬೆ ಅವರ 8 ವರ್ಷಗಳ ಅಧಿಕಾರವಧಿಯಲ್ಲಿ ಕ್ಯಾಬಿನೆಟ್‌ ಕಾರ್ಯದರ್ಶಿಯಂಥ ಪ್ರಭಾವಿ ಸ್ಥಾನದಲ್ಲಿ 71 ವರ್ಷದ ಸುಗಾ ಕಾರ್ಯ ನಿರ್ವಹಿಸಿದ್ದಾರೆ.

Comments