Weekend Snacks: Weekendನಲ್ಲಿ ಸಂಜೆ ಹೊತ್ತು ಬಿಸಿ-ಬಿಸಿ ಟೀ ಜೊತೆಗೆ ಟ್ರೈ ಮಾಡಿ ನೋಡಿ ಈ ಬೇಳೆ ಮತ್ತು ರವೆಯ ಸ್ನ್ಯಾಕ್ಸ್

 

Weekend Snacks: Weekendನಲ್ಲಿ ಸಂಜೆ ಹೊತ್ತು ಬಿಸಿ-ಬಿಸಿ ಟೀ ಜೊತೆಗೆ ಟ್ರೈ ಮಾಡಿ ನೋಡಿ ಈ ಬೇಳೆ ಮತ್ತು ರವೆಯ ಸ್ನ್ಯಾಕ್ಸ್

ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಸಂಜೆಯ ಹೊತ್ತು ಸ್ನ್ಯಾಕ್ಸ್ ಮಾಡಲು ಸಾಕಷ್ಟು ಸಮಯಾವಕಾಶ ಇರುತ್ತದೆ. ಹೀಗಾಗಿ ಕಿಚನ್ ನಲ್ಲಿ ನೀವು ಹೊಸ ತಿಂಡಿಯ ಎಕ್ಸ್ಪರಿಮೆಂಟ್ ಕೂಡ ಮಾಡಬಹುದು.

Weekend Snacks: Weekendನಲ್ಲಿ ಸಂಜೆ ಹೊತ್ತು ಬಿಸಿ-ಬಿಸಿ ಟೀ ಜೊತೆಗೆ ಟ್ರೈ ಮಾಡಿ  ನೋಡಿ ಈ ಬೇಳೆ ಮತ್ತು ರವೆಯ ಸ್ನ್ಯಾಕ್ಸ್

ನವದೆಹಲಿ: ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಸಂಜೆಯ ಹೊತ್ತು ಸ್ನ್ಯಾಕ್ಸ್ ಮಾಡಲು ಸಾಕಷ್ಟು ಸಮಯಾವಕಾಶ ಇರುತ್ತದೆ. ಹೀಗಾಗಿ ಕಿಚನ್ ನಲ್ಲಿ ನೀವು ಹೊಸ ತಿಂಡಿಯ ಎಕ್ಸ್ಪರಿಮೆಂಟ್ ಕೂಡ ಮಾಡಬಹುದು. ಹಲವು ಜನರು ವಿಕೆಂಡ್ ವೇಳೆಯಲ್ಲಿ ವಿಶೇಷ ತಿಂಡಿ ತಯಾರಿಸುವ ವಾಡಿಕೆ ಕೂಡ ಇರುತ್ತದೆ.  ನೀವೂ ಕೂಡ ನಿಮ್ಮ ಶನಿವಾರದ ಸಂಜೆಯನ್ನು ಮಜವಾಗಿ ಕಳೆಯಲು ಯೋಜನೆ ರೂಪಿಸುತ್ತಿದ್ದರೆ, ರವೆ ಮತ್ತು ಬೇಳೆಯಿಂದ ತಯಾರಿಸಲಾಗುವ ಈ ಸ್ನ್ಯಾಕ್ಸ್ ಟ್ರೈ ಮಾಡಿ ನೋಡಿ

ಬೇಳೆ ಮತ್ತು ರವೆಯಿಂದ ತಯಾರಿಸಲಾಗುವ ಸ್ನ್ಯಾಕ್ಸ್
ಇತ್ತೀಚಿಗೆ ರವೆಯಿಂದ ತಯಾರಿಸಲಾಗುವ ತಿಂಡಿಗಳು ನಮ್ಮ-ನಿಮ್ಮ ಕಿಚನ್ ಭಾಗವಾಗಿವೆ. ಕೇವಲ ರವಾ ಕೇಸರಿ ಮಾತ್ರವಲ್ಲ, ರವೆಯನ್ನು ಇಡ್ಲಿ. ಡೋಕ್ಲಾ, ಬೋಂಡಾ ಇತ್ಯಾದಿಗಳ ತಯಾರಿಕೆಗೆ ಬಳಸಲಾಗುತ್ತದೆ. ಹೀಗಾಗಿ ಬನ್ನಿ ರವೆಯಿಂದ ತಯಾರಿಸಲಾಗುವ ಸ್ವಾದಿಷ್ಟ ಹಾಗೂ ರುಚಿಕರವಾದ ಈ ಸ್ನ್ಯಾಕ್ಸ್ ಅನ್ನು ಹೇಗೆ ತಯಾರಿಸಬೇಕು ಎಂಬುದನ್ನೊಮ್ಮೆ ತಿಳಿಯೋಣ.

ಬೇಕಾಗುವ ಸಾಮಗ್ರಿ
1 ಬಟ್ಟಲು ಬೇಯಿಸಿದ ಕಪ್ಪು ಬೇಳೆ
4 ಟೇಬಲ್ ಸ್ಪೂನ್ ರವೆ
2 ಹಸಿ ಮೆಣಸಿನ ಕಾಯಿ
ರುಚ್ಚಿಗೆ ತಕ್ಕ ಹಾಗೆ ಉಪ್ಪು
2 ಟೇಬಲ್ ಸ್ಪೂನ್ ಮೊಸರು
1 ಟೇಬಲ್ ಸ್ಪೂನ್ ಚಟ್ನಿ
1 ಟೀ ಸ್ಪೂನ್ ಹುರಿದ ಜೀರಾ
1 ಟೀ ಸ್ಪೂನ್ ಜಿಂಜರ್-ಗಾರ್ಲಿಕ್ ಪೇಸ್ಟ್
1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತಂಬರಿ ಸೊಪ್ಪು.

ತಯಾರಿಸುವ ವಿಧಾನ
1. ಮೊದಲು ಬೇಯಿಸಿದ ಕಪ್ಪು ಬೆಲೆ, ಹಸಿ ಮೆಣಸಿನಕಾಯಿ, ಚಟ್ನಿ, ರುಚಿಗೆ ತಕ್ಕಂತೆ ಉಪ್ಪು ಹಾಗೂ ಮೊಸರನ್ನು ಮಿಕ್ಸಿ ಜಾರ್ ಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ಇದರಲ್ಲಿ ನೀವೂ ಸ್ವಲ್ಪ ನೀರನ್ನೂ ಕೂಡ ಬೆರೆಸಬಹುದು.

2. ಈಗ ಬೌಲ್ ವೊಂದರಲ್ಲಿ ರವೆಯನ್ನು ಹಾಕಿ ಅದರಲ್ಲಿ ಹುರಿದ ಜೀರಾ, ಜಿಂಜರ್-ಗಾರ್ಲಿಕ್ ಪೇಸ್ಟ್, ಗ್ರೈಂಡ್ ಮಾಡಿದ ಬೇಳೆಯ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

3. ಈಗ ತಯಾರಾದ ಮಿಕ್ಸರ್ ಅನ್ನು 15 ನಿಮಿಷಗಳ ಕಾಲ ಪ್ರತ್ಯೆಕವಾಗಿಡಿ. ಇದರಿಂದ ರವೆ ಚೆನ್ನಾಗಿ ಅರಳುತ್ತದೆ. 

4. ಇದೀಗ ಈ ಮಿಶ್ರಣವನ್ನು ಹಲವು ಭಾಗಗಳಲ್ಲಿ ಪ್ರತ್ಯೇಕಿಸಿ ಓವಲ್ ಶೇಪ್ ಉಂಡೆಗಳನ್ನು ತಯಾರಿಸಿ.

5. ಬೌಲ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ರವೆ-ಬೇಳೆಯ ಓವಲ್ ಶೇಪ್  ಉಂಡೆಗಳನ್ನು ತಿಳು ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ. ಬಳಿಕ ಕಡಾಯಿಯಿಂದ ಹೊರತೆಗೆದು ನಿಮ್ಮ ನೆಚ್ಚಿನ ಚಟ್ನಿ ಅಥವಾ ಸಾಸ್ ಮೊಲಕ ರುಚಿ ನೋಡಿ.

Comments